ಕನ್ನಡದಲ್ಲಿ ಫೋಟೋಗ್ರಫಿ ಕಲಿಯಿರಿ - Learn Photography in Kannada

Learn Photography in Kannada

ಫೋಟೋಗ್ರಫಿ ಎಂಬುದು ಬೆಟ್ಟದ ಮೇಲಿರುವ ಒಂದು ಸುಂದರ ಅರಮನೆಯಂತೆ. ಅದನ್ನು ತಲುಪಲು ನಾವು ಕ್ಯಾಮೆರಾ ಮತ್ತು ಅದರ ತಂತ್ರಜ್ಞತೆಯ ಬಗೆಗಿನ ತಿಳುವಳಿಕೆಯೊಂದಿಗೆ ಮೆಟ್ಟಲೇರುವುದು ಬಹು ಅವಶ್ಯಕ.

ಎಷ್ಟೋ ಸಲ ನಾವು ಛಾಯಾಚಿತ್ರವೊಂದನ್ನು ಕಂಡು ಆನಂದಿಸುತ್ತೇವೆ. ಮಾತ್ರವಲ್ಲ, ಅಂತಹ ಚಿತ್ರಗಳನ್ನು ನಾವೂ ಸೆರೆಹಿಡಿಯಬೇಕೆಂದೂ ಅಂದುಕೊಳ್ಳುತ್ತೇವೆ. ಆದರೆ ಆ ಚಿತ್ರಗಳ ಹಿನ್ನಲೆಯಲ್ಲಿ ಅಡಗಿರುವ ಕಲಾತ್ಮಕತೆ ಹಾಗು ತಾಂತ್ರಿಕ ವೈಶಿಷ್ಟ್ಯಗಳ ಬಗ್ಗೆ ಬಹುಪಾಲು ನಾವು ಚಿಂತಿಸುವುದೇ ಇಲ್ಲ.
Workshops Timings: 9:30 AM to 5:30 PM

Course: N/A Category: Tag:

2,750.00

PLUS 18% GST

Clear

Description

ನಮ್ಮ ಫೋಟೋಗ್ರಫಿ ತರಬೇತಿ ಶಿಬಿರವು ನಿಮಗೆಷ್ಟು ಅಗತ್ಯ?

ಈ ಅನುಭವಗಳು ನಿಮಗೂ ಆಗಿರಲು ಸಾಧ್ಯ:

Play Video

ತರಬೇತಿ ಶಿಬಿರದ ಪಕ್ಷಿನೋಟ

ಈ ಶಿಬಿರದಿಂದ ನೀವೇನು ಕಲಿಯುತ್ತೀರಿ?

ಫೋಟೋಗ್ರಫಿ ಒಂದು ಕಲೆ, ಆದರೆ ಅದು ವಿಜ್ಞಾನವೂ ಹೌದು. ಈ ತರಬೇತಿ ಶಿಬಿರ, ಈ ಎರಡೂ ವೈಶಿಷ್ಟ್ಯಗಳ ಆಳ-ವಿಸ್ತಾರಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಫೋಟೋಗ್ರಫಿಯ ಮೂಲಭೂತ ನಿಯಮಗಳನ್ನು ಕಲಿಯುತ್ತಲೇ, ಅದರ ಪ್ರೌಢ ಪರಿಕಲ್ಪನೆ, ವಿಷಯಗಳನ್ನೂ ನೀವು ಕರಗತ ಮಾಡಿಕೊಳ್ಳಬಹುದು. 

ಎಕ್ಸ್ಪೋಷರ್, ಫೋಕಸಿಂಗ್ ಮತ್ತು ಮೀಟರಿಂಗ್ ಈಗ ನೀವು ಸೆರೆಹಿಡಿಯಬೇಕಾದ ಕ್ಷಣಕ್ಕೆ ಅಡ್ಡವಾಗಿ ನಿಲ್ಲದೇ, ನಿಮಗೆ ಆಪ್ತವಾಗಿ ಸಹಾಯ ಮಾಡುತ್ತವೆ. ನೀವು ಒಂದು ಛಾಯಾಚಿತ್ರವನ್ನು ನಿಮ್ಮ ಮನಸ್ಸಿನಲ್ಲಿ ಅಂದುಕೊಂಡಂತೆಯೇ ನಿಮ್ಮ ಕ್ಯಾಮೆರಾದ ಸಹಾಯದಿಂದ ಕಾರ್ಯರೂಪಗೊಳಿಸಬಹುದು.

ಅತ್ಯುತ್ತಮ ತರಬೇತುದಾರರು

ದೇಶದ ಪ್ರಖ್ಯಾತ ಪ್ರಶಸ್ತಿ-ವಿಜೇತ ಛಾಯಾಗ್ರಾಹಕರು ಶಿಬಿರ ನಡೆಸುತ್ತಾರೆ

ಸುವ್ಯವಸ್ಥಿತ ವಿಷಯಸೂಚಿ

ಕಲಿಯಬೇಕಾದ ಎಲ್ಲಾ ವಿಷಯಗಳ ವ್ಯಾಪಕ ವಿವರಗಳು ದೊರೆಯುತ್ತದೆ

ಪ್ರಾಯೋಗಿಕ ತರಬೇತಿ

ಕಲಿಕೆಯ ಪ್ರತಿ ವಿಷಯಕ್ಕೂ ಕಾರ್ಯಶೀಲ ಚಟುವಟಿಕೆಗಳಿರುತ್ತದೆ

ಹೊಸಬರಿಗೂ ಸ್ವಾಗತ

ಶಿಬಿರಕ್ಕೆ ಮುನ್ನ ಛಾಯಾಗ್ರಹಣದ ಬಗ್ಗೆ ಅರಿವಿನ ಅಗತ್ಯವಿಲ್ಲ

ಮುಗಿಯದ ಕಲಿಕೆ

ಶಿಬಿರದ ನಂತರವೂ ನಿಮ್ಮ ನೆರವಿಗೆ ತರಬೇತುದಾರರನ್ನು ಸಂಪರ್ಕಿಸಬಹುದು

ಈ ಶಿಬಿರ ಮುಗಿದಮೇಲೆ ನೀವೇನು ಮಾಡಬಹುದು:

ತರಬೇತುದಾರರು

ಜಯಂತ್ ಶರ್ಮಾ

ಜಯಂತ್ ಶರ್ಮಾ

CEO ಹಾಗೂ ಸುಪ್ರಸಿದ್ಧ ವನ್ಯಜೀವಿ ಛಾಯಾಗ್ರಾಹಕ

ಛಾಯಾಗ್ರಹಣ ಅತ್ಯಂತ ಪ್ರಾಭಾವಶಾಲಿ ಕಲೆಯಾಗುವುದು ಕಲೆಗಾರನ ಸೂಕ್ಷ್ಮದೃಷ್ಟಿ ಮತ್ತು ಸ್ವಂತಿಕೆಯೆರಡೂ ವಿಲೀನಗೊಂಡಾಗ ಎಂದು ಧೃಢವಾಗಿ ನಂಬಿರುವ ಜಯಂತ್ ಶರ್ಮಾ, ನಮ್ಮ ದೇಶದ ಅತ್ಯುನ್ನತ ವನ್ಯಜೀವಿ ಛಾಯಾಗ್ರಾಹಕರಲ್ಲೊಬ್ಬರು. ಈ ಕಲೆಯ ಬಗ್ಗೆ ಅಪಾರ ಒಲವು, ಅಭಿರುಚಿ ಬೆಳೆಸಿಕೊಂಡಿರುವ ಜಯಂತ್ ಶರ್ಮಾ, ತಮ್ಮ ಕ್ಯಾಮೆರಾವನ್ನು ಅವರ ಕಲ್ಪನಾಶಕ್ತಿಗೆ ತಕ್ಕಂತೆ ದುಡಿಸಿಕೊಳ್ಳುವ ನಿಪುಣ ಯುವ ಛಾಯಾಗ್ರಾಹಕರಾಗಿದ್ದಾರೆ. ಅವರ ಕಲೆ, ಅನುದಿನದ ನೋಟಗಳಿಗೇ ಭಿನ್ನವಾದ ಅಮೂರ್ತ ಅನುಭೂತಿ ನೀಡುತ್ತಾ ನೋಡುಗರಲ್ಲೂ ಅನೇಕ ಭಾವಗಳನ್ನು ಉದ್ದೀಪಿಸುತ್ತದೆ. ಇದುವರೆಗೂ ನೂರಾರು ಫೋಟೋಗ್ರಫಿ ಆಸಕ್ತರನ್ನು ನಮ್ಮ ತರಬೇತಿ ಶಿಬಿರಗಳ ಮೂಲಕ ಪರಿಣತಿಯತ್ತ ಮುನ್ನಡೆಯುವಂತೆ ಮಾಡಿರುವ ಜಯಂತ್ ಶರ್ಮಾ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

ಶಿಬಿರದ ವಿವರಪಟ್ಟಿ

ಪ್ರಸ್ತಾವನೆ, ಚರ್ಚೆ ಮತ್ತು ನಿರೀಕ್ಷೆಗಳ ವಿನಿಮಯ, ಕಾರ್ಯಸೂಚಿ ಮತ್ತು ಫಲಿತಾಂಶ


ಡಿಜಿಟಲ್ ಫೋಟೋಗ್ರಫಿಯ ಗುಣ-ದೋಷಗಳು


ಕ್ಯಾಮೆರಾ ಫಾರ್ಮ್ಯಾಟ್

ಕ್ಯಾಮೆರಾ ಫಾರ್ಮ್ಯಾಟ್ ವಿಧಗಳಾವುವು? ಫಾರ್ಮ್ಯಾಟ್ ಮಹತ್ವ ಏನು?


ರೆಸೊಲ್ಯೂಷನ್ (ಮೆಗಾ ಪಿಕ್ಸೆಲ್ಸ್)

ನಿಮ್ಮ ಕ್ಯಾಮೆರಾಗೆ ಎಷ್ಟು ರೆಸೋಷನ್ ಇರಬೇಕು? ರೆಸೊಲ್ಯೂಷನ್ ಮಹತ್ವವಾದರೂ ಏನು?


SLR ಕ್ಯಾಮೆರಾ ಕೆಲಸ ಮಾಡುವ ಪರಿ

ವ್ಯೂಫೈಂಡರ್ ಹೇಗೆ ಕೆಲಸ ಮಾಡುತ್ತದೆ?


DSLR ಮತ್ತು ಪಾಯಿಂಟ್-ಅಂಡ್-ಶೂಟ್ ಕ್ಯಾಮೆರಾಗಳು

ಇವೆರಡರ ನಡುವಿನ ವ್ಯತ್ಯಾಸಗಳೇನು? ಅವುಗಳ ನಿಖರವಾದ ಅನುಕೂಲಗಳೇನು?


ನಿಮ್ಮ ಕ್ಯಾಮೆರಾವನ್ನು ಅರ್ಥಮಾಡಿಕೊಳ್ಳುವುದು

ಕ್ಯಾಮೆರಾ ಮೇಲಿರುವ ಎಲ್ಲ ಬಟನ್-ಗಳ ಕೆಲಸಗಳೇನು? ಯಾವುದನ್ನು ಯಾವಾಗ ಬಳಸಬೇಕು?


ಫೋಕಲ್ ಲೆಂಥ್ ಮತ್ತು ಮ್ಯಾಗ್ನಿಫಿಕೇಷನ್

ಫೋಕಲ್ ಲೆಂಥ್ ಎಂದರೇನು? ನಿಮ್ಮ ದೃಷ್ಟಿಕೋನ ಮತ್ತು ಚಿತ್ರಗಳ ಮೇಲೆ ಅದರ ಪರಿಣಾಮವೇನು?


ವಿವಿಧ ಬಗೆಯ ಲೆನ್ಸ್-ಗಳು

ಲೆನ್ಸ್ ಬಗೆಗಳ ನಡುವಿನ ವ್ಯತ್ಯಾಸಗಳೇನು? ಯಾವ ಫೋಟೋಗ್ರಫಿ ಶೈಲಿಗೆ ಯಾವ ಲೆನ್ಸ್ ಸಮರ್ಥವಾಗಿರುತ್ತದೆ?


ಎಕ್ಸ್ಪೋಷರ್ ಗ್ರಹಿಕೆ

ಎಕ್ಸ್ಪೋಷರ್ ಎಂದರೇನು? ಯಾವ ವಿವರಗಳೆಲ್ಲ ಸೇರಿದರೆ ಎಕ್ಸ್ಪೋಷರ್ ಎನಿಸಿಕೊಳ್ಳುತ್ತವೆ? ಅದರ ಮಹತ್ವ ಏನು?


ಅಪರ್ಚರ್

ಅಪರ್ಚರ್ ಎಂದರೇನು? ಅದನ್ನು ಹೇಗೆ ನಿರೂಪಿಸಲಾಗುತ್ತದೆ? ಅದು ಹೇಗೆ ಪರಿಣಾಮಕಾರಿಯಾಗುತ್ತದೆ?


ಶಟರ್ ಸ್ಪೀಡ್

ಶಟರ್ ಸ್ಪೀಡ್ ಎಂದರೇನು? ಅದನ್ನು ಹೇಗೆ ನಿಗದಿಪಡಿಸಲಾಗುತ್ತದೆ? ಬೇರೆಬೇರೆ ಶಟರ್ ಸ್ಪೀಡ್ ಚಿತ್ರಗಳ ಮೇಲೆ ಯಾವ್ಯಾವ ಪರಿಣಾಮ ಉಂಟುಮಾಡುತ್ತದೆ?


ISO

ISO ಸೆನ್ಸಿಟಿವಿಟಿ ಎಂದರೇನು? ಅದನ್ನು ಹೇಗೆ ನಮೂದಿಸಲಾಗುತ್ತದೆ? ಬೇರೆಬೇರೆ ISO ಚಿತ್ರಗಳ ಮೇಲೆ ಎಂತೆಂತಹ ಪರಿಣಾಮ ಉಂಟುಮಾಡುತ್ತದೆ?


ಎಕ್ಸ್ಪೋಷರ್ ಪ್ರೋಗ್ರಾಮ್ ಮೋಡ್-ಗಳು

ಯಾವ್ಯಾವ ಎಕ್ಸ್ಪೋಷರ್ ಪ್ರೋಗ್ರಾಮ್ ಮೋಡ್-ಗಳಿವೆ? ಅವನ್ನು ಹೇಗೆ ಮತ್ತು ಯಾವಾಗ ಬಳಸಲಾಗುತ್ತದೆ?


ಮೀಟರಿಂಗ್

ಮೀಟರಿಂಗ್ ಎಂದರೇನು? ಯಾವ್ಯಾವ ಮೀಟರಿಂಗ್ ಮೋಡ್-ಗಳಿವೆ? ಅವನ್ನು ಹೇಗೆ ಮತ್ತು ಯಾವಾಗ ಬಳಸಲಾಗುತ್ತದೆ?


ಮಾನ್ಯುಯಲ್ ಮೋಡ್

ಮಾನ್ಯುಯಲ್ ಮೋಡ್ ಏನು ಮಾಡುತ್ತದೆ? ಯಾವಾಗ ಅದನ್ನು ಬಳಸಬೇಕು ಮತ್ತು ಎಷ್ಟು ಬಳಸಬೇಕು?


ಎಕ್ಸ್ಪೋಷರ್ ಕಾಂಪೆನ್ಸೇಷನ್

ಇದರ ಉಪಯೋಗವೇನು? ಇದನ್ನು ಯಾವಾಗ ಮತ್ತು ಎಷ್ಟು ಬಳಸಬೇಕು?


ಬ್ರ್ಯಾಕೆಟಿಂಗ್

ಬ್ರ್ಯಾಕೆಟಿಂಗ್ ಎಂದರೇನು? ಅದನ್ನು ಯಾವಾಗ ಮತ್ತು ಹೇಗೆ ಬಳಸಬೇಕು?

ಹಿಂದಿನ ದಿನದ ವಿಷಯಗಳ ಮನನ. ಪ್ರಶ್ನೋತ್ತರಗಳ ಸಮಯ.


ಆಟೋಫೋಕಸ್ ಮತ್ತು ಮಾನ್ಯುಯಲ್ ಫೋಕಸ್

ಫೋಕಸಿಂಗ್ ಯಾಕೆ ಮುಖ್ಯ? ಆಟೋಫೋಕಸ್ ಏನು ಮಾಡುತ್ತದೆ? ಮಾನ್ಯುಯಲ್ ಫೋಕಸ್ ಯಾವಾಗ ಬಳಸಬೇಕು?


ಆಟೋಫೋಕಸ್ ಮೋಡ್-ಗಳು
ಆಟೋಫೋಕಸ್ ಮೋಡ್-ಗಳ ವಿಧಗಳಾವುವು? ಯಾವಾಗ ಯಾವುದನ್ನು ಬಳಸಬೇಕು?


ಆಟೋಫೋಕಸ್ ಏರಿಯಾ ಸೆಲೆಕ್ಷನ್ ಮೋಡ್-ಗಳು
ನಿಮ್ಮ ಫ್ರೇಮ್-ನ ಯಾವ ಭಾಗವನ್ನು ಫೋಕಸ್ ಮಾಡಬೇಕೆಂದು ಹೇಗೆ ನಿರ್ಧರಿಸುವುದು? ಇದರಲ್ಲಿ ಯಾವ ಆಯ್ಕೆಗಳಿವೆ?


ಡೆಪ್ತ್ ಆಫ್ ಫೀಲ್ಡ್

ಹೈ ಮತ್ತು ಲೋ ಡೆಪ್ತ್ ಆಫ್ ಫೀಲ್ಡ್-ಗಳೆಂದರೇನು? ಅದರ ಮಹತ್ವವೇನು ಮತ್ತು ಅದನ್ನು ಹೇಗೆ ನಿಯಂತ್ರಿಸುವುದು?


ಕಾಂಪೋಸಿಷನ್

ಚಿತ್ರಗಳನ್ನು ಚೆಂದವಾಗಿ ಸಂಯೋಜಿಸುವುದು ಹೇಗೆ? ಭಾವವುದ್ದೀಪಿಸುವಂತೆ ಚಿತ್ರಸಂಯೋಜನೆ ಮಾಡಲು ಸಲಹಾಸೂತ್ರಗಳೇನು?


ವೈಟ್ ಬ್ಯಾಲೆನ್ಸ್

ವೈಟ್ ಬ್ಯಾಲೆನ್ಸ್ ಎಂದರೇನು? ಅದರ ಮಹತ್ವವೇನು? ಸರಿಯಾದ ವೈಟ್ ಬ್ಯಾಲೆನ್ಸ್ ಹೇಗೆ ಆಯ್ಕೆ ಮಾಡುವುದು?


ಪೋಸ್ಟ್-ಪ್ರೋಸೆಸ್ಸಿಂಗ್

ಪೋಸ್ಟ್-ಪ್ರೋಸೆಸ್ಸಿಂಗ್ ಎಂದರೇನು? ಛಾಯಾಚಿತ್ರಗಳ ಸೌಂದರ್ಯ ವರ್ಧಿಸಲು ಮಾಡಬಹುದಾದ ಬದಲಾವಣೆಗಳೇನು?


ಸಾಮಾನ್ಯ ಮತ್ತು ಉಪಯುಕ್ತ ಟಿಪ್ಪಣಿ-ತಂತ್ರಗಳು

ಶಾರ್ಪ್ ಚಿತ್ರಗಳನ್ನು ಸೆರೆಹಿಡಿಯುವುದು ಹೇಗೆ? ರಾ (raw) ಫಾರ್ಮ್ಯಾಟ್-ನಲ್ಲಿ ಶೂಟ್ ಮಾಡುವುದರ ಲಾಭವೇನು? ಹಿಸ್ಟಾಗ್ರಾಮ್ ಒಂದನ್ನು ಹೇಗೆ ಅರ್ಥೈಸಿಕೊಳ್ಳುವುದು?

ಫೋಟೋಗ್ರಫಿಗೆ ಸಂಬಂಧಿಸಿದ ಪ್ರಶ್ನೋತ್ತರಗಳ ಅಧಿವೇಶನ

ತರಬೇತಿ ಶಿಬಿರ ಮುಗಿದ ನಂತರ ನಿಮಗೆ ಇ-ಪ್ರಮಾಣಪತ್ರವನು ಕೊಡಲಾಗುವುದು.

ಇದರೊಟ್ಟಿಗೆ, ನಿಮ್ಮ ಶಿಬಿರ ಮಾರ್ಗದರ್ಶಿಯ ಜೊತೆ ಫೋಟೋಗ್ರಫಿ ಎಂಬ ಕಲೆಯ ಅಡಿಪಾಯದ ಮೇಲೆ ಜೀವಮಾನದ ಒಡನಾಟ. ಹಾಗೇ, ನಮ್ಮ ಟೋಹೋಲ್ಡ್ ನೆಟ್ವರ್ಕ್-ಗೆ ಸ್ವಾಗತ!

ಹಿಂದಿನ ಶಬಿರಗಳಲ್ಲಿ ಭಾಗವಸಿದವರ ಅನಿಸಿಕೆ-ಅಭಿಪ್ರಾಯಗಳು

Play Video
ಶ್ರೀಕೃಷ್ಣ ಹೆರ್ಳೇಕರ್
Read More
ಅದ್ಭುತವಾದ ಅನುಭವ! ಆಟೋ ಮೋಡ್-ನಿಂದ ಮುಕ್ತಿ ಪಡೆದು ಕ್ಯಾಮೆರಾ ಬಗ್ಗೆ ಹೊಸ ಜ್ಞಾನ ಪಡೆಯಲು ಈ ಶಿಬಿರಕ್ಕೆ ಸೇರಿದ್ದೆ. ನಮ್ಮ ಪ್ರತಿಭಾವಂತ, ಸ್ನೇಹಪರ ಮಾರ್ಗದರ್ಶಿ ಫೋಟೋಗ್ರಫಿಯ ಕ್ಲಿಷ್ಟ ಮತ್ತು ಗಹನವಾದ ವಿಷಯಗಳನ್ನೂ ಅತ್ಯಂತ ಸರಳವಾಗಿ ವಿವರಿಸಿದರು. ನಾನು ಇಷ್ಟರಲ್ಲೇ ಸಿಕ್ಕಿಮ್-ಗೆ ಪಯಣಿಸುತ್ತಿದ್ದೇನೆ, ಅಲ್ಲಿಂದ ಹಿಂದೆಂದಿಗಿಂತಲೂ ಉತ್ತಮವಾದ ಚಿತ್ರಗಳನ್ನು ಸೆರೆಹಿಡಿದು ಬರಲು ಈಗ ನನಗೆ ಸಂಪೂರ್ಣ ವಿಶ್ವಾಸವಿದೆ.
ಶಿವ ಎಸ್. ಕುಮಾರ್
Read More
ಟೋಹೋಲ್ಡ್ ಫೋಟೋಗ್ರಫಿ ತರಬೇತಿ ಶಿಬಿರ ಸೇರಲು ನಾನು ತುಂಬಾ ಉತ್ಸುಕನಾಗಿದ್ದೆ! ಮತ್ತು ನನ್ನೆಲ್ಲಾ ನಿರೀಕ್ಷೆಗಳನ್ನು ಅದು ಪೂರೈಸಿತು. ಫೋಟೋಗ್ರಫಿಯ ಕಲೆ ಮತ್ತು ವಿಜ್ಞಾನಗಳ ತಮ್ಮ ಆಳವಾದ ಜ್ಞಾನವನ್ನು ನಮ್ಮ ಮಾರ್ಗದರ್ಶಿ ಹಂಚಿಕೊಂಡರು. ಅವರ ಸ್ವಂತ ವನ್ಯಜೀವಿ ಛಾಯಾಗ್ರಹಣದ ಅನುಭವಗಳ ಹಂಚಿಕೊಂಡಾಗ ಕೇಳಲು ರೋಮಾಂಚನಕಾರಿಯಾಗಿತ್ತು. ಶಿಬಿರವನ್ನು ಎರಡೂ ದಿನಗಳನ್ನು ಕಲಿಕೆಯ ಜೊತೆ ಬಹಳ ಖುಷಿಯಿಂದ ಕಳೆದೆ.
ಸಿದ್ಧಾರ್ಥ ಅಧಿಕಾರಿ
Read More
ಮೊದಲನೆಯದಾಗಿ, ಶಿಬಿರದ ಎರಡೂ ದಿನದ ನಿಮ್ಮೆಲ್ಲ ಶ್ರಮಕ್ಕೆ, ಛಾಯಾಗ್ರಹಣದ ವಿವಿಧ ಮಜಲುಗಳು ನಮಗೆ ಅರ್ಥವಾಗಲು ಸಹಾಯ ಮಾಡಿದ ನಿಮಗೆ ನನ್ನ ಧನ್ಯವಾದಗಳು. ನಮ್ಮೆಲ್ಲರಿಗೂ ಇದು ಅದ್ಭುತ ಅನುಭವವಾಗಿತ್ತು. ನಾನು ಖಂಡಿತವಾಗಿಯೂ ನೆನ್ನೆಲ್ಲ ಸ್ನೇಹಿತರಿಗೆ ಈ ಶಿಬಿರದ ಬಗ್ಗೆ ತಿಳಿಸುತ್ತೇನೆ, ಅವರೆಲ್ಲರೂ ಖುಷಿಯಿಂದ ಕಲಿಯುತ್ತಾರೆಂದು ನನಗೆ ನಂಬಿಕೆಯಿದೆ.

ತರಬೇತಿ ಶಿಬಿರದ ಶುಲ್ಕ

₹ 3,245/-

ಊಟ, ಟೀ ಮತ್ತು (GST) ತೆರಿಗೆಶುಲ್ಕಗಳೆಲ್ಲವೂ ಸೇರಿ. 

ನೋಂದಣಿ ರದ್ದುಗೊಳಿಸಲು ಅನ್ವಯವಾಗುವ ಷರತ್ತುಗಳು

ಶುಲ್ಕ ಪಾವತಿಸಿದ ನಂತರ ನೀವು ನಿಮ್ಮ ಪಾಲ್ಗೊಳ್ಳುವಿಕೆಯನ್ನು ರದ್ದುಗೊಳಿಸಬೇಕಾದರೆ, ನಿಮಗೆ ಒಂದು ‘ಕ್ರೆಡಿಟ್ ನೋಟ್’ ಕಳುಹಿಸುತ್ತೇವೆ. ಅದನ್ನು ನೀವು ನಮ್ಮ ವೆಬ್-ತಾಣದಲ್ಲಿ ಲಭ್ಯವಿರುವ ನಮ್ಮ ಯಾವುದೇ ಸೇವೆ-ಸೌಲಭ್ಯಗಳನ್ನು ಪಡೆಯಲು ಬಳಸಬಹುದು:

 

  • ಶಿಬಿರಕ್ಕೆ ಹಿಂದಿನ ಸೋಮವಾರದಂದು ರದ್ದು ಮಾಡಿದರೆ ಶುಲ್ಕದ ಶೇಕಡಾ 100%ರಷ್ಟು
  • ಶಿಬಿರಕ್ಕೆ ಹಿಂದಿನ ಸೋಮವಾರ ಮತ್ತು ಗುರುವಾರದ ಮಧ್ಯೆ ರದ್ದು ಮಾಡಿದರೆ ಶೇಕಡಾ 50%ರಷ್ಟು

ಶಿಬಿರಕ್ಕೆ ಹಿಂದಿನ ಗುರುವಾರದ ನಂತರ ನಿಮ್ಮ ಭಾಗವಸುವಿಕೆ ರದ್ದು ಮಾಡಿದ್ದಲ್ಲಿ, ನಮ್ಮ ಗಮನಕ್ಕೆ ತರದೇ ಶಿಬಿರದ ದಿನ ಬರದಿದ್ದಲ್ಲಿ, ಯಾವುದೇ ಶುಲ್ಕ ಮರುಪಾವತಿ ಮಾಡಲಾಗುವುದಿಲ್ಲ.

ಶಿಬಿರದ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

ಖಂಡಿತವಾಗಿಯೂ! ಈ ಶಿಬಿರವನ್ನು ರೂಪುಗೊಳಿಸುವಾಗ, ಭಾಗವಸುವವರು ಮುಂಚಿತವಾಗಿ ಹೊಂದಿರಬಹುದಾದ ಯಾವ ಮಾಹಿತಿಯನ್ನೂ ಪರಿಗಣಿಸಿಲ್ಲ. ಕಲಿಕೆಯ ಎಲ್ಲ ಮಟ್ಟಗಳ ಗಮನದಲ್ಲಿಟ್ಟುಕೊಂಡು ಈ ಶಿಬಿರವನ್ನು ವಿನ್ಯಾಸಗೊಳಿಸಲಾಗಿದೆ. ಹಾಗೆನೋಡಿದರೆ, ನೀವು ಈ ಕಲೆಗೆ ಹೊಸಬರೆಂಬುದಕ್ಕಾಗಿಯೇ ನೀವು ಈ ಶಿಬಿರದಲ್ಲಿ ಪಾಲ್ಗೊಳ್ಳಬೇಕು.

ಹೌದು. ಈ ಶಿಬಿರದಲ್ಲಿ ಚರ್ಚಿಸಲಾಗುವ ಫೋಟೋಗ್ರಫಿಯ ಮೂಲಭೂತ ವಿಷಯಗಳು ಎಲ್ಲ ಬಗೆಯ ಕ್ಯಾಮೆರಾಗಳಿಗೂ ಅನ್ವಯವಾಗುತ್ತವೇ. ನಿಮ್ಮ ಕಾಂಪ್ಯಾಕ್ಟ್ ಕ್ಯಾಮೆರಾದಲ್ಲಿ ಮಾನ್ಯುಯಲ್ ಕಂಟ್ರೋಲ್ ಇದ್ದಾರೆ, ಈ ಶಿಬಿರ ನಿಮಗೆ ಇನ್ನೂ ಸಹಾಯಕವಾಗುತ್ತದೆ. ಆದರೆ ಶಿಬಿರದ ಪೂರ್ತಿ ಪ್ರಯೋಜನ ಪಡೆಯಲು, ಆ ಎರಡು ದಿನಗಳ ಮಟ್ಟಿಗಾದರೂ ನಮ್ಮ ಕ್ಯಾಮೆರಾ ರೆಂಟಲ್ಸ್-ನಿಂದ ಒಂದು DSLR-ಅನ್ನು ಬಾಡಿಗೆಗೆ ತೆಗೆದುಕೊಳ್ಳಿ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ.

ಈ ಪುಟದ ಕಡೆಯಲ್ಲಿರುವ ನೋಂದಾವಣೆಯ ಫಾರ್ಮ್ ಭಾರ್ತಿ ಮಾಡಿ, ಇಲ್ಲವೇ 1800-1200-901 ಗೆ ಕರೆಮಾಡಿ, ಇಲ್ಲವೇ workshops@toehold.in ಗೆ ಇ-ಅಂಚೆ ಕಳುಹಿಸಿ.
ಶಿಬಿರದ ಶುಲ್ಕವನ್ನು ನೀವು ನಿಮಗೆ ಅನುಕೂಲಕರವಾದ ರೀತಿಯಲ್ಲಿ ಆನ್ಲೈನ್ ಪಾವತಿಸಬಹುದು. ನಿಮ್ಮ ವಿಚಾರಣೆಯ ನಂತರ ಇದರ ಬಗ್ಗೆ ಹೆಚ್ಚಿನ ಮಾಹಿತಿ ನಿಮ್ಮೊಡನೆ ಹಂಚಿಕೊಳ್ಳುತ್ತೇವೆ.
ದಯವಿಟ್ಟು ನಿಮ್ಮ ಕ್ಯಾಮೆರಾ ಮತ್ತು ಲೆನ್ಸ್ ತನ್ನಿ. ಪೂರ್ತಿ ಚಾರ್ಜ್ ಮಾಡಿದ ಬ್ಯಾಟರಿ, ಮತ್ತು ಶಿಬಿರದ ಪೂರ್ತಿ ಅಭ್ಯಾಸ ಮಾಡಲು ಸೆರೆಹಿಡಿಯುವ ಚಿತ್ರಗಳನ್ನು ಕೂಡಿಡುವಷ್ಟು ಸ್ಥಳಾವಕಾಶ ಇರುವ ಮೆಮೊರಿ ಕಾರ್ಡ್-ಅನ್ನು ಜೊತೆಗೆ ತನ್ನಿ. ನಿಮ್ಮ ಕ್ಯಾಮೆರಾಮಾನ್ಯುಯಲ್ ಕೂಡಾ ಮರೆಯದಿರಿ.
ಹಣ ಭಾರಿಸಿದ ನಂತರ ನೀವು ಪಾಲ್ಗೊಳ್ಳಲು ಸಾಧ್ಯವಿಲ್ಲದಿದ್ದರೆ, ವಾರಾಂತ್ಯದ ನಮ್ಮ ಶಿಬಿರದ ಹಿಂದಿನ ಸೋಮವಾರವೇ ತಿಳಿಸಿ, ಶೇಕಡಾ 100%ರಷ್ಟು ‘ಕ್ರೆಡಿಟ್ ನೋಟ್’ ಅನ್ನು ಪಡೆದು, ಅದನ್ನು ನಮ್ಮ ಯಾವುದೇ ಇತರ ಸೇವೆ-ಸೌಲಭ್ಯಗಳನ್ನು ಪಡೆಯಲು ಬಳಸಬಹುದು. ಶಿಬಿರಕ್ಕೆ ಹಿಂದಿನ ಸೋಮವಾರ ಮತ್ತು ಗುರುವಾರದ ಮಧ್ಯೆ ರದ್ದು ಮಾಡಿದರೆ ಶೇಕಡಾ 50%ರಷ್ಟು ಕ್ರೆಡಿಟ್ ನೋಟ್ ಪಡೆಯಬಹುದು. ಶಿಬಿರಕ್ಕೆ ಹಿಂದಿನ ಗುರುವಾರದ ನಂತರ ನಿಮ್ಮ ಭಾಗವಸುವಿಕೆ ರದ್ದು ಮಾಡಿದ್ದಲ್ಲಿ, ನಮ್ಮ ಗಮನಕ್ಕೆ ತರದೇ ಶಿಬಿರದ ದಿನ ಬರದಿದ್ದಲ್ಲಿ, ಯಾವುದೇ ಶುಲ್ಕ ಮರುಪಾವತಿ ಮಾಡಲಾಗುವುದಿಲ್ಲ.

Additional information

Location

Bengaluru, Online Virtual Classroom

Date

Fri, May 14, 2021

Share this !

Share on facebook
Share on linkedin
Share on twitter
Share on whatsapp
Share on pinterest